ಸಂಸ್ಥೆಯ ಇತಿಹಾಸ

ಸ್ವವಿವರ

ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯು, ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯು ವಿಶ್ವ ಬ್ಯಾಂಕ್ ನೆರವಿನೊಂದಿಗೆ ರಾಜ್ಯದಲ್ಲಿನ ರಸ್ತೆ ಜಾಲವನ್ನು ಅಭಿವೃದ್ಧಿಗೊಳಿಸಲು ಸ್ಥಾಪಿಸಿರುವ ಸಂಸ್ಥೆ. ಲೋಕೋಪಯೋಗಿ ಇಲಾಖೆಯು 1996 ರಲ್ಲಿ ಕಾರ್ಯತಂತ್ರ ಆಯ್ಕೆ ಅಧ್ಯಯನವನ್ನು ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನೊಳಗೊಂಡ 13,362 ಕಿ.ಮೀ. ಉದ್ದದ ರಸ್ತೆ ಜಾಲದಲ್ಲಿ ಕೈಗೊಂಡು, ಅವುಗಳಲ್ಲಿ 2888 ಕಿ.ಮೀ. ಉದ್ದದ ರಸ್ತೆಗಳನ್ನು ಆದ್ಯತೆಯಾಗಿ ಅಭಿವೃದ್ಧಿಗೊಳಿಸಬೇಕೆಂದು ಈ ಅಧ್ಯಯನವು ಗುರುತಿಸಿತು. ಮೆ: ಸ್ಕಾಟ್ ವಿಲ್ಸನ್ ಕಿರ್ಕ್ ಪ್ಯಾಟ್ರಿಕ್, ಯುನೈಟೆಡ್ ಕಿಂಗ್ಡಮ್ ಇವರನ್ನು ವಿಶ್ವ ಬ್ಯಾಂಕ್ ನ ಸಹಮತಿಯೊಂದಿಗೆ ಆಯ್ಕೆ ಮಾಡಿ 2505 ಕಿ.ಮೀ. ಗಳ ಮೇಲೆ ಯೋಜನಾ ಸಮನ್ವಯ ಸಮಾಲೋಚಕರ ಸೇವೆ ಕಾರ್ಯ ನಡೆಸಲು ದಿ: 7-1-1999 ರಂದು ನೇಮಕ ಮಾಡಲಾಗಿದೆ. ಯೋಜನಾ ಸಮನ್ವಯ ಸಮಾಲೋಚಕರ ಸೇವೆಯನ್ನು ಹಂತ 1 ಹಾಗೂ 2 ಎಂದು ವಿಂಗಡಿಸಲಾಗಿದೆ. ಯೋಜನಾ ಸಮನ್ವಯ ಸಮಾಲೋಚಕರು ಸಾಧ್ಯತೆಗಳ ಕುರಿತು ಹಾಗೂ ಸಾಮಾಜಿಕ ಮತ್ತು ಪರಿಸರ ಮಾಲಿನ್ಯದ ಬಗ್ಗೆ ಪರಾಮರ್ಶಿಸಿ 2271 ಕಿ.ಮೀ. ಗಳನ್ನು ಆದ್ಯತೆಯ ಮೇಲೆ ಅಭಿವೃದ್ಧಿಪಡಿಸಲು ಗುರುತಿಸಿರುತ್ತಾರೆ. 992 ಕಿ.ಮೀ. ಗಳನ್ನು ಮೇಲ್ದರ್ಜೆಗೇರಿಸಲು ಹಾಗೂ 1277 ಕಿ.ಮೀ. ಗಳನ್ನು ಪುನರ್ ನಿರ್ಮಿಸಲು ಉದ್ದೇಶಿಸಲಾಗಿದೆ. ಯೋಜನಾ ಸಮನ್ವಯ ಸಮಾಲೋಚಕರು ಮುಂದುವರೆದು ಸಮೀಕ್ಷೆ ಮತ್ತು ಸಂಶೋಧನೆ ಕೈಗೊಂಡು, ವಿಸ್ತೃತವಾದ ತಾಂತ್ರಿಕ ವಿವರ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಮತ್ತು ಆಯ್ಕೆ ಮಾಡಿದ ರಸ್ತೆಗಳ ಸಂಪರ್ಕದ ಮೇಲೆ ಪರಿಸರದ ಮಾಲಿನ್ಯದ ಪರಿಣಾಮವನ್ನು ಅಭ್ಯಸಿಸಿ, 992 ಕಿ.ಮೀ. ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಹಾಗೂ 1277 ಕಿ.ಮೀ. ರಸ್ತೆಗಳನ್ನು ಪುನರ್ ನಿರ್ಮಿಸಲು ವಿಸ್ತೃತವಾದ ತಾಂತ್ರಿಕ ವಿನ್ಯಾಸ ಅಂಶಗಳನ್ನೊಳಗೊಂಡ ಹಂತ 1 ಹಾಗೂ 2ರ ಅಂತಿಮ ವರದಿಯನ್ನು ಸಲ್ಲಿಸಿರುತ್ತಾರೆ. ಹಾಗು ಇವರು ಪರಿಸರ ಮಾಲಿನ್ಯ ಪರಿಣಾಮದ ಬಗ್ಗೆ, ಸಾಮಾಜಿಕ – ಆರ್ಥಿಕ ಸಮೀಕ್ಷೆ ಮತ್ತು ಪುನರ್ವಸತಿ ಕಾರ್ಯಯೋಜನೆಯ ಕುರಿತೂ ಸಹಾ ವರದಿಸಲ್ಲಿಸಿರುತ್ತಾರೆ. ಈ ಯೋಜನೆಯಲ್ಲಿ ಚಳ್ಳಕೆರೆ, ಮುಧೋಳ, ಬಿಜಾಪುರ, ಸಿಂಧನೂರು, ಕುಡಚಿ, ರಾಯಚೂರು ಇತ್ಯಾದಿಗಳಲ್ಲಿ 50 ಕಿ.ಮಿ.ಉದ್ದದ ಬೈಪಾಸ್ ರಸ್ತೆಯನ್ನು ನಿರ್ಮಿಸುವ ಉದ್ದೇಶವಿದೆ.

ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ವ್ಯವಸ್ಥೆ

ಮೇಲ್ದರ್ಜೆಗೇರಿಸುವುದು :

ಸಂಚಾರ ಅಧ್ಯಯನವನ್ನಾಧರಿಸಿ, ಆಯ್ಕೆ ಮಾಡಿದ ಅಧ್ಯಯನದಲ್ಲಿ ಸಂಚಾರದ ಪರಿಮಾಣವು ಏಕಪಥ / ದ್ವಿಪಥ ರಸ್ತೆಗಳಿಗೆ ವಿನ್ಯಾಸಗೊಳಿಸಿರುವ ಪರಿಮಾಣವನ್ನು ಮೀರಿರುತ್ತದೆ. ಅಧ್ಯಯನ ಮಾಡಿದ ರಸ್ತೆಗಳಲ್ಲಿ ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಮತ್ತು ಇತರೆ ಕ್ಷೇತ್ರಗಳಲ್ಲಿ ಆಗಿರುವ ಅಭಿವೃದ್ಧಿಗಳಿಂದ ನೆಟ್ ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್ (NSDP) ಹೆಚ್ಚಿಸಲಿದ್ದು ಇದು ಸಂಚಾರ ಹೆಚ್ಚಳಕ್ಕೂ ಕಾರಣವಾಗುತ್ತದೆ. ಅಂದರೆ ಆಧ್ಯಯನಕ್ಕೆ ಆಯ್ಕೆ ಮಾಡಿದ ರಸ್ತೆಗಳು ಉದ್ದೇಶಿಸಿರುವ ಸಂಚಾರವನ್ನು ತಾಳಿಕೊಳ್ಳಲು ವಿಶಾಲವಾಗಿರುಬೇಕು. ಆದ್ದರಿಂದ ಉದ್ದೇಶಿತ - ಬಿ ಹಂತದ ಸೇವೆಯನ್ನು ಕಾಯ್ದುಕೊಳ್ಳಲು ಹಾಲಿ ಇರುವ ರಸ್ತೆಗಳನ್ನು ಅಗಲೀಕರಣ/ಅಗಲೀಕರಣ ಮತ್ತು ಬಲಪಡಿಸುವುದು ಅವಶ್ಯವಿರುತ್ತದೆ.

ಪ್ರಮುಖ ನಿರ್ವಹಣಿ / ಪುನರ್ವಸತಿ :

ಹಾಲಿ ಇರುವ ರಸ್ತೆಗಳಲ್ಲಿ ಎಲ್ಲೆಲ್ಲಿ ಸಂಚಾರ ದಟ್ಟಣೆಯು Design Service Volumeನ್ನು ಮೀರುವುದಿಲ್ಲವೋ ಅಲ್ಲಿ ಒಂದು ಮೇಲ್ಪದರ ಹಾಕಿ ವಾಹನ ಸಂಚಾರದ ತಾಳಿಕೆಗಾಗಿ ಮತ್ತು ಸಂಚಾರದ ಅವಧಿಯನ್ನು ಮತ್ತು ವಾಹನ ನಿರ್ವಹಣೆ ವೆಚ್ಚ ಕಡಿಮೆ ಮಾಡಲು ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ.ಈ ರೀತಿಯ ಪ್ರಕ್ರೆಯೆಯನ್ನು ಪುನರ್ವಸತಿ / ಪುನರ್ವ್ಯ ವಸ್ಥೆ ಎನ್ನಲಾಗುತ್ತದೆ.
ರಸ್ತೆ ಅಗಲೀಕರಣದ ಯೋಜನೆಗಾಗಿ ಒಟ್ಟಾರೆ 220 ಎಕರೆಗಳಷ್ಟು ಖಾಸಗಿ ಮತ್ತು ಸರ್ಕಾರಿ ಜಮೀನು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಹಂತ - 1 ರ ರಸ್ತೆ ಯೋಜನೆಗೆ 28 17 1/2 ಎಕರೆ ಜಮೀನನ್ನು ಗುಲ್ಬರ್ಗಾ, ಬಿಜಾಪುರ, ರಾಯಚೂರು, ಬೀದರ್ ಮತ್ತು ಕೊಪ್ಪಳದಲ್ಲಿ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯು ಚಾಲ್ತಿಯಲ್ಲಿದೆ.
ಈ ಯೋಜನೆ ಇಂದ ತೊಂದರೆಗೊಳಗಾಗುವ ಕುಟುಂಬಗಳ ತೊಂದರೆಯನ್ನು ತಗ್ಗಿಸಲು ಸರ್ಕಾರವು ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ನಿಯಮಾವಳಿಗಳನ್ನು ರೂಪಿಸಿದೆ.
ಹಂತ - 1 ರಲ್ಲಿ 252 ಹಾಗೂ ಹಂತ - 2 ರಲ್ಲಿ 4000 ತೊಂದರೆಗೊಳಗಾಗುವ ಕುಟುಂಬಗಳು ಇವೆ.
ಭೂಸ್ವಾಧೀನ ಪ್ರಕ್ರಿಯೆುಂದ ಉಂಟಾಗುವ ಸಮಸ್ಯೆಗಳನ್ನು ತಗ್ಗಿಸಲು ಪುನರ್ ವ್ಯವಸ್ಥೆ ಕಾರ್ಯ ಯೋಜನೆಯನ್ನು ಹಂತ - 1 ರಲ್ಲಿ ರೂ.4.50 ಕೋಟಿ ಮತ್ತು ಹಂತ - 2 ರಲ್ಲಿ 16.13 ಕೋಟಿ ವೆಚ್ಚದಲ್ಲಿ, ಹಾಗೂ ಪುನರ್ ವ್ಯವಸ್ಥೆಗಾಗಿ ಹಂತ - 1 ರಲ್ಲಿ 21.20 ಕೋಟಿ ಮತ್ತು ಹಂತ - 2 ರಲ್ಲಿ 29.00 ಕೋಟಿ ವೆಚ್ಚದಲ್ಲಿ ತಯಾರಿಸಲಾಗಿದೆ.
ಯೋಜನಾ ಅನುಷ್ಠಾನ ಘಟಕದಲ್ಲಿ ಸಹಾಯಕ ಆಯುಕ್ತರು, ಭೂಸ್ವಾಧೀನ ಮತ್ತು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇವರುಗಳನ್ನೊಳಗೊಂಡ ಸಾಮಾಜಿಕ ಅಭಿವೃದ್ಧಿ ಮತ್ತು ಪುನರ್ವ್ಯವಸ್ಥೆ ಕೋಶ (SRDC)ನ್ನು ಸೂಕ್ತ ಸಿಬ್ಬಂದಿಯೊಂದಿಗೆ ರಚಿಸಲಾಗಿದೆ. ಈ ಕೋಶಗಳು ಪುನರ್ ವ್ಯವಸ್ಥೆ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವ ಪಾತ್ರವನ್ನು ಹೊಂದಿರುತ್ತದೆ.

ಸಾರ್ವಜನಿಕ ಉಪಯುಕ್ತತೆಯ ವಸ್ತುಗಳ ಸ್ಥಾನ ಬದಲಾವಣಿ :

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು, Corridor of Impactನಲ್ಲಿ ಸಾಲು ಮರಗಳನ್ನು ಕಡಿಯುವುದೂ ಸೇರಿದಂತೆ ಸಾರ್ವಜನಿಕ ಬಳಕೆಯ ವಸ್ತುಗಳನ್ನು ಸ್ಥಾನ ಬದಲಾವಣೆ ಮಾಡಲು ಮತ್ತು ಪುನರ್‍ಸ್ಥಾಪಿಸುವ ಉಸ್ತುವಾರಿ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಹಂತ - 1 ರಲ್ಲಿ ಸ್ಥಾನಪಲ್ಲಟಗೊಳಿಸುವ ಕಾರ್ಯ ಚಾಲನೆಯಲ್ಲಿದೆ.

ಪರಿಸರ ಮೇಲಿನ ಪರಿಣಾಮಗಳು ಮತ್ತು ನಿರ್ವಹಣಿ:

ಬಹಳಷ್ಟು ಪರಿಸರದ ಮೇಲಿನ ಪರಿಣಾಮಗಳು ನಿರ್ಮಾಣ ಹಂತಕ್ಕೆ ಸೀಮಿತವಾಗಿದೆ ಮತ್ತು ಒಳ್ಳೆಯ ನಿರ್ಮಾಣದ ಅಭ್ಯಾಸ ಹಾಗೂ ಪರಿಣಾಮಕಾರಿ ಮೇಲ್ವಿಚಾರಣೆ ಬಹುಪಾಲು ಪರಿಣಾಮಗಳನ್ನು ಕಡಿಮೆಗೊಳಿಸುತ್ತದೆ.
ಹಾಲಿ ಇರುವ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯನ್ನು ಮುಂದುವರೆಸಿದರೆ ಹಂತ - 1 ರಲ್ಲಿ 5393 ಮರಗಳನ್ನು ಹಾಗೂ ಹಂತ - 2 ರಲ್ಲಿ 565 ಮರಗಳನ್ನು ಉರುಳಿಸಬೇಕಾಗುತ್ತದೆ. ಯೋಜನೆಯಲ್ಲಿ ಪ್ರತಿ 1 ಕಿ.ಮೀ. ಗೆ 200 ಮರಗಳನ್ನು ನೆಡುವ ಹಾಗೂ 5 ವರ್ಷಗಳವರೆಗೆ ನಿರ್ವಹಣೆ ಮಾಡುವ ಅವಕಾಶ ಕಲ್ಪಿಸಿದೆ. ಮೇಲ್ದರ್ಜೆಗೇರಿಸುವ ರಸ್ತೆಗಳಲ್ಲಿ ಒಟ್ಟು 1,00,000 ಮರಗಳನ್ನು ನೆಡಲಾಗುವುದು. ಅರಣ್ಯ ಇಲಾಖೆಯೊಂದಿಗೆ ಈ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲು ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ.
ಪರಿಸರ ನಿರ್ವಹಣಾ ಯೋಜನೆಯನ್ನು(EMP) ರೂಪಿಸಿದ್ದು ಈ ಯೋಜನೆಯು ಉಪಶಮನ ಕ್ರಮಗಳನ್ನು ಅನುಷ್ಟಾನಗೊಳಿಸುವ ಉಸ್ತುವಾರಿ ಹೊತ್ತಿರುವ ಸಮಾಲೋಚಕರ ಮೇಲ್ವಿಚಾರಣೆ ಮತ್ತು ಪರಿಸರ ಸಂರಕ್ಷಣೆ ವಿಷಯದಲ್ಲಿ ಸಿವಿಲ್ ಗುತ್ತಿಗೆದಾರರ ಕರಾರಿನ ಬಾಧ್ಯತೆಗಳನ್ನು ವಿವರಿಸುತ್ತದೆ. ಪರಿಸರ ನಿರ್ವಹಣಾ ಯೋಜನೆಯ ಅನುಷ್ಟಾನ ಘಟಕವೊಂದನ್ನು(EMPIU) ಯೋಜನಾ ಅನುಷ್ಟಾನ ಘಟಕದಲ್ಲಿ ರಚಿಸಲಾಗಿದೆ ಮತ್ತು ಪರಿಸರ ಅಭಿಯಂತರರು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಸೂಕ್ತ ಸಿಬ್ಬಂದಿಯೊಂದಿಗೆ ಪರಿಸರ ನಿರ್ವಹಣಾ ಯೋಜನೆಯನ್ನು ಅನುಷ್ಟಾನಗೊಳಿಸುವ ಉಸ್ತುವಾರಿ ನೋಡಿಕೊಳ್ಳಲು ನೇಮಿಸಲಾಗಿದೆ. ರೂ. 21.00 ಕೋಟಿಗಳಷ್ಟು ಮೊತ್ತವನ್ನು ಪರಿಸರ ನಿರ್ವಹಣಾ ಯೋಜನೆಯನ್ನು ಅನುಷ್ಟಾನಗೊಳಿಸುವುದಕ್ಕೆ ಹಂಚಿಕೆ ಮಾಡಲಾಗಿದೆ.

ಸಂಗ್ರಹಣಾ ವಿಧಾನಗಳು :

ಬ್ಯಾಂಕ್ ಸಾಲದ ಅಡಿಯಲ್ಲಿ ಪಡೆದಿರುವ ಎಲ್ಲಾ ವಸ್ತುಗಳು, ಕಾಮಗಾರಿ ಮತ್ತು ಸಮಾಲೋಚಕರ ಸೇವೆಯಲ್ಲಿನ ಸಂಗ್ರಹಣಾ ಪ್ರಕ್ರಿಯೆಯಲ್ಲಿ ವಿಶ್ವ ಬ್ಯಾಂಕ್ನ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು.
992 ಕಿ.ಮೀ. ಉದ್ದವನ್ನು ಮೇಲ್ದರ್ಜೆಗೇರಿಸುವ ಹಾಗು ಅಗಲೀಕರಿಸುವ ಪ್ರಕ್ರಿಯೆಯನ್ನು 8 ಭಾಗಗಳಲ್ಲಿ ಒಪ್ಪಂದದ ಮೌಲ್ಯ ರೂ. 35.00 ಕೋಟಿ ಮತ್ತು ರೂ.205.00 ಕೋಟಿ ಶ್ರೇಣಿ ಇರುವ ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಹರಾಜಿನಡಿಯಲ್ಲಿ ಕಡೆ ಅನುಷ್ಟಾನಗೊಳಿಸಲಾಗುವುದು. ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯ ಒಪ್ಪಂದದ ಮೊತ್ತ ಸಣ್ಣದಾಗಿ ರೂ.3.00 ಕೋಟಿ ಮತ್ತು ರೂ.38.00 ಕೋಟಿ ಶ್ರೇಣಿಯಲ್ಲಿರುವ ಕಡೆ ಆ ಕಾಮಗಾರಿಗಳಿಗೆ ರಾಷ್ಟ್ರೀಯ ಸ್ಪರ್ಧಾತ್ಮಕ ಹರಾಜಿನಡಿಯಲ್ಲಿ ಸಂಗ್ರಹಣೆ ಮಾಡಲಾಗುವುದು.
ವಸ್ತುಗಳು ಮತ್ತು ಕಂಪ್ಯೂಟರ್ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್-ಗಳನ್ನೊಳಗೊಂಡ ಉಪಕರಣಗಳು, ವಾಹನಗಳು, ಕಛೇರಿ ಮತ್ತು ಪ್ರಯೋಗಾಲಯದ ಉಪಕರಣಗಳನ್ನು ರಾಷ್ಟ್ರೀಯ/ಅಂತಾರಾಷ್ಟ್ರೀಯ ಕಾರ್ಯವಿಧಾನಗಳಡಿ ಸಂಗ್ರಹಿಸಲಾಗುವುದು ಹಾಗೂ ಸಣ್ಣ ಮೊತ್ತದ ಶೆಲ್ಫ್ ಐಟಂಗಳನ್ನು ರಾಷ್ಟ್ರೀಯ/ಅಂತಾರಾಷ್ಟ್ರೀಯ ಖರೀದಿ ವಿಧಾನಗಳಡಿ ಸಂಗ್ರಹಿಸಲಾಗುವುದು. ಸಮಾಲೋಚಕರ ಸೇವೆಯನ್ನು ಪಡೆಯಲು ವಿಶ್ವ ಬ್ಯಾಂಕ್ ಮಾರ್ಗಸೂಚಿಗಳನ್ವಯ ಸಮಾಲೋಚಕರನ್ನು ಆಯ್ಕೆ ಮಾಡಿ ನೇಮಿಸಲಾಗುವುದು.