ಪ್ರಸ್ತುತ ಯೋಜನೆಗಳ ವಿವರ
ಕ ರಾ ಹೆ ಅ ಯೋ ೨ - ವಿಶ್ವ ಬ್ಯಾಂಕ್ ನೆರವಿನ ಯೋಜನೆ
1. ಕರ್ನಾಟಕ ಸರ್ಕಾರವು ರಾಜ್ಯ ಹೆದ್ದಾರಿಗಳನ್ನು ಅಭಿವೃದ್ದಿಪಡಿಸಲು ಈಗ ಕ.ರಾ.ಹೆ.ಆಯೋ - 2 ನ್ನು
ಪ್ರಸ್ತಾಪಿಸಿದೆ. 14,090 ಕಿ.ಮೀ. ರಾಜ್ಯ ಹೆದ್ದಾರಿಯ ಮೇಲೆ ಕಾರ್ಯತಂತ್ರ ಆಯ್ಕೆ ಅಧ್ಯಯನವನ್ನು ನಡೆಸಿದೆ.
ಆಯ್ದ 4888 ಕಿ.ಮೀ. ರಸ್ತೆಗಳ ಮೇಲೆ ಸಾಧ್ಯಾಸಾಧ್ಯತೆಗಳ ಅಧ್ಯಯನವನ್ನು ನಡೆಸಿದೆ. ವಿಸ್ತೃತ ಯೋಜನಾ
ವರದಿ ತಯಾರಿಸಲು ರಸ್ತೆಗಳನ್ನು ಆಯ್ಕೆ ಮಾಡುವಾಗ 80% ಪ್ರಾಧಾನ್ಯತೆಯನ್ನು
economic internal rate of return ಹಾಗೂ 20% ಪ್ರಾಧಾನ್ಯತೆಯನ್ನು ಡಾ: ನಂಜುಂಡಪ್ಪ
ಸಮಿತಿಯ ವರದಿಯ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ಸಲ್ಲಿಸಿರುವ ಅಭಿವೃದ್ಧಿ ವಂಚಿತ ಸೂಚಿಯನ್ನು
ಪರಿಗಣಿಸಲಾಗಿದೆ. ಸಚಿವ ಸಂಪುಟದಲ್ಲಿ ನವೆಂಬರ್ 2006 ರಲ್ಲಿ ಒಪ್ಪಿರುವಂತೆ ಕೊನೆಯದಾಗಿ 3411 ಕಿ.ಮಿ.
ಉದ್ದದ ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಗುರುತಿಸಲಾಗಿದೆ. 3411 ಕಿ.ಮೀ. ರಸ್ತೆಯ ವಿಸ್ತøತ
ಯೋಜನಾ ವರದಿ ತಯಾರಿಕೆಗಾಗಿ ಸಮಾಲೋಚಕರನ್ನು ನೇಮಿಸಲು ಆದೇಶವನ್ನು ಸರ್ಕಾರಿ ಆದೇಶ ಸಂ: ಲೋಇ 61 ಇಎಪಿ
2006, ದಿ:25-11-2006 ರಲ್ಲಿ ಹೊರಡಿಸಲಾಗಿದೆ. ವಿಶ್ವ ಬ್ಯಾಂಕ್ ನಿಯಮಗಳಂತೆ ಮೆ: ಸ್ಕಾಟ್ವಿ ಲ್ಸನ್
ಲಿ., ಯು.ಕೆ. ಯನ್ನು ಮೆ: ಸ್ಕಾಟ್ವಿರಲ್ಸನ್ ಇಂಡಿಯಾ ಲಿ., ದೆಹಲಿ ಇವರೊಂದಿಗೆ ವಿಸ್ತೃತ ಯೋಜನಾ ವರದಿ
ತಯಾರಿಸಲು ನೇಮಿಸಲಾಗಿದೆ.
2. 3411 ಕಿ.ಮೀ. ಗಳಿಗೆ ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ.
3. ಭಾರತ ಸರ್ಕಾರದ ವಿತ್ತ ಇಲಾಖೆಯು ವಿಶ್ವ ಬ್ಯಾಂಕಿನಿಂದ ಕೆಶಿಪ್ – 2 ಗಾಗಿ ಯುಎಸ್ $ 300 ಮಿಲಿಯನ್
ಸಾಲಕ್ಕಾಗಿ ಶಿಫಾರಸ್ಸು ಮಾಡಿದೆ.
ಮಿ. ಬಿನ್ಯಮ್ ರೆಜಾ ನೇತೃತ್ವದ ವಿಶ್ವ ಬ್ಯಾಂಕ್ನ ತಂಡವು ಯೋಜನೆಯ ಪ್ರಗತಿ ಹಾಗೂ ಪೂರ್ವಭಾವಿ ತಯಾರಿ
ಯನ್ನು ಪರಾಮರ್ಶಿಲು ಹಾಗೂ ಯೋಜನಾ ತಯಾರಿಯಲ್ಲಿ ಬಾಕಿ ಉಳಿದಿರುವ ಚಟುವಟಿಕೆಗಳನ್ನು ಚರ್ಚಿಸಿ ಅನುಮೋದಿಸಲು
ಮತ್ತು ಯೋಜನೆಯ ವರದಿ ಸಲ್ಲಿಸಲು ನಿಗದಿ ಪಡಿಸಿರುವ ಕಾಲಾವಧಿ ಹಾಗೂ ಪ್ರಸ್ತಾವಿತ ಕ.ರಾ.ಹೆ.ಆಯೋ -
2 ಬಗ್ಗೆ ಅನುಮೋದಿಸಲು ಭೇಟಿ ನೀಡಿತು. 831 ಕಿ.ಮೀ. ಉದ್ದದ ರಸ್ತೆಯನ್ನು ಕ.ರಾ.ಹೆ.ಆಯೋ - 2 ನ 1ನೇ
ಹಂತದಲ್ಲಿ ವಿಶ್ವ ಬ್ಯಾಂಕ್ ನ ಆರ್ಥಿಕ ನೆರವಿನೊಂದಿಗೆ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಯಿತು. ಒಟ್ಟಾರೆ
831 ಕಿ.ಮೀ. ಗಳ ಪೈಕಿ 269 ಕಿ.ಮೀ. ಉದ್ದವನ್ನು ಇಪಿಸಿ ಮಾದರಿಯಲ್ಲಿ ಮತ್ತು ಉಳಿದ 562 ಕಿ.ಮೀ.ಗಳನ್ನು
ರ್ವಾಕ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಪ್ರಸ್ತಾಪಿಸಿದೆ. ಭೂ ಸ್ವಾಧೀನ ಪ್ರಕ್ರಿಯೆ, ಭೂಮಿಯ ಮೇಲಿನ
ಋಣಭಾರ ತೀರಿಕೆ, ಮತ್ತು ಪರಿಸರ ಮಾಲಿನ್ಯ ಕುರಿತು ಒಪ್ಪಿಗೆ ಪತ್ರ ಇತ್ಯಾದಿಗಳನ್ನು ಪಡೆಯುವ ಕಾರ್ಯ
ಪ್ರಗತಿಯಲ್ಲಿದೆ.
4. ವಿಶ್ವ ಬ್ಯಾಂಕ್ ನವರು ಕರ್ನಾಟಕ ಸರ್ಕಾರಕ್ಕೆ ತಾಂತ್ರಿಕ ಸಹಾಯ ಮತ್ತು ಸಲಹಾ ಸೇವೆಗಳಿಗಾಗಿ ಖಾಸಗಿ
ಮತ್ತು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಖಾಸಗಿ ವಲಯಗಳಿಂದ,ಸರ್ಕಾರದ ವತಿ ಇಂದ
(domestic) ಆರ್ಥಿಕ ವ್ಯವಸ್ಥೆ, ಮತ್ತು Viability Gap Funding(VGF)ನಿಂದ
ಸಂಪನ್ಮೂಲಗಳನ್ನು ಕ್ರೋಢೀಕರಸಲು, ಖಾಸಗಿ ಮತ್ತು ಸಾರ್ವಜನಿಕ ವಲಯದ ಮೂಲಭೂತಸೌಕರ್ಯ ಸಲಹಾ ಸೌಲಭ್ಯ
Public Private Infrastructure Advisory Facility (PPIAF)
ಅನುದಾನವಾಗಿ ರೂ 44,000 ಅನುದಾನವನ್ನು ಒದಗಿಸಿರುತ್ತಾರೆ. PPIAF ಸಮಾಲೋಚಕರು ಕರಡು ವರದಿ ಸಲ್ಲಿಸಿರುತ್ತಾರೆ.
ಕ ರಾ ಹೆ ಅ ಯೋ ೨ - ವಿಶ್ವ ಬ್ಯಾಂಕ್ ನೆರವಿನ ಯೋಜನೆ (ಹಂತ-೧)
ಭಾರತ ಸರ್ಕಾರದ ವಿತ್ತ ಇಲಾಖೆಯು ವಿಶ್ವ ಬ್ಯಾಂಕಿನಿಂದ ಕೆಶಿಪ್ – 2 ಗಾಗಿ ಯುಎಸ್ $300 ಮಿಲಿಯನ್ ಸಾಲಕ್ಕಾಗಿ ಶಿಫಾರಸ್ಸು ಮಾಡಿದೆ. ಯೋಜನೆ ಈಗಿನ ಸ್ಥಿತಿಯು ಕೆಳಕಂಡಂತಿದೆ.
826 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳನ್ನು ದ್ವಿಪಥ ರಸ್ತೆಗಳನ್ನಾಗಿ ವಿಶ್ವ ಬ್ಯಾಂಕ್ ನಿಧಿಯಲ್ಲಿ ಮೇಲ್ದರ್ಜೆಗೇರಿಸಲು ಅಂತಿಮಗೊಳಿಸಲಾಗಿದೆ. ಯೋಜನೆಯನ್ನು ಅನುಷ್ಟಾನಗೊಳಿಸುವಾಗ 2 ರೀತಿಯ ಗುತ್ತಿಗೆ ವಿಧಾನಗಳಲ್ಲಿ ಅಂದರೆ
EPC contracts (conventional item rate contract)
ಮತ್ತು Annuity contractsಗಳಲ್ಲಿ ಕೈಗೆತ್ತಿಕೊಳ್ಳಲು ಪ್ರಸ್ತಾಪಿಸಲಾಗಿದೆ.
ವಾರ್ಷಿಕಗುತ್ತಿಗೆಯು 10 ವರ್ಷಗಳ ಕಾಲಾವಧಿ ಹೊಂದಿದ್ದು ಅದರಲ್ಲಿ ಗರಿಷ್ಟ 3 ವರ್ಷ ನಿರ್ಮಾಣ ಅವಧಿಯಾಗಿದ್ದು ಉಳಿದ 7 ವರ್ಷಗಳು ನಿರ್ವಹಣೆ ಅವಧಿಯಾಗಿರುತ್ತದೆ.
ವಾರ್ಷಿಕ ವಿನಾಯಿತಿ ಗುತ್ತಿಗೆಗಳಲ್ಲಿ ಶೇಕಡಾ 50% ರಷ್ಟು ವಿಶ್ವ ಬ್ಯಾಂಕ್ ನೆರವನ್ನು ನಿರ್ಮಾಣ ಹಂತದಲ್ಲಿ ಹಾಗೂ ಉಳಿದ ಹಣವನ್ನು 7 ವರ್ಷಗಳ ನಿರ್ವಹಣೆ ಅವಧಿಯಲ್ಲಿ ರಾಜ್ಯದ ಬೊಕ್ಕಸದಿಂದ ಪಾವತಿಯಾಗುವಂತೆ ವರ್ಷಾವಾರು ಪಡೆಯಲು ಪ್ರಸ್ತಾಪಿಸಲಾಗಿದೆ.
EPCಗುತ್ತಿಗೆಗಳಿಗೆ ಬಿಡ್ಗಳನ್ನು ಆಹ್ವಾನಿಸಲಾಗಿದೆ. ದಿ: 01-06-2010 ರಂದು ಬಿಡ್ಗಳನ್ನು ತೆರೆಯಲಾುತು.
ಬಿಡ್ಗಳನ್ನು ಯೋಜನಾ ಅನುಷ್ಟಾನ ಘಟಕದಲ್ಲಿ ಪರಿಶೀಲಿಸುವ / ಪರಿಷ್ಕರಿಸುವ ಕೆಲಸವನ್ನು ಅಂತಿಮಗೊಳಿಸಲಾಯಿತು ಮತ್ತು ವಿಶ್ವ ಬ್ಯಾಂಕ್ನಿಂದ ಅನುಮೋದನೆಮಾಡಿದ ಬಿಡ್ಗಳ ಪರಿಷ್ಕರಿಸಿದ ವರದಿಯನ್ನು ಸದ್ಯದಲ್ಲೇ ನಿರೀಕ್ಷಿಸಲಾಗಿದೆ.
ವಿಶ್ವ ಬ್ಯಾಂಕ್ನ ಅನುಮೋದನೆ ನಂತರ ಡಿಸೆಂಬರ್, 2010 ರಲ್ಲಿ 5 EPC Contractಗಳ ಕಾಮಗಾರಿಗಾಗಿ ಗುತ್ತಿಗೆದಾರರನ್ನು ಚಾಲನೆಗೊಳಿಸಲಾಗುವುದು.
EPC ಗುತ್ತಿಗೆಗಳಿಗೆ ನಿರ್ಮಾಣ, ಮೇಲ್ವಿಚಾರಣೆ, ಸಮಾಲೋಚನಾ ಸೇವೆಯನ್ನು ಚಾಲನೆಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಮತ್ತು ಬ್ಯಾಂಕುಗಳಿಂದ RFPಗಳ
ತಾಂತ್ರಿಕ ಪರಿಶೀಲನೆಗಾಗಿ ನಿರಾಪೇಕ್ಷಣವನ್ನು ಪಡೆಯಲಾಗಿದೆ. ಆರ್ಥಿಕ ಪ್ರಸ್ತಾವನೆಗಳನ್ನು ಸದ್ಯದಲ್ಲೇ ತೆರೆಯಲಾಗುವುದು.
Annuity Contractsಗಳನ್ನು ಸಂಗ್ರಹಣೆ ಮಾಡಲು ಬಿಡ್ ದಾಖಲೆಗಳನ್ನು ವಿಶ್ವ ಬ್ಯಾಂಕ್ನ ಸಮಾಲೋಚನೆಯೊಂದಿಗೆ ಅಂತಿಮಗೊಳಿಸುವ ಹಂತದಲ್ಲಿದೆ. ಜನವರಿ, 2011 ರೊಳಗೆ ಬ್ಯಾಂಕಿನ ಅನುಮೋದನೆಯನ್ನು ನಿರೀಕ್ಷಿಸಲಾಗಿದೆ.
Annuity Contractsಗಳನ್ನು ಸಂಗ್ರಹಣೆ ಮಾಡಲು ತಾಂತ್ರಿಕ ಸಲಹಾ ಸಮಾಲೋಚನ ಸೇವೆಯನ್ನು ಪಡೆಯುವ ಕಾರ್ಯವನ್ನು ಪ್ರಾರಂಭಿಸಲಾಗಿದೆ.
ವಿಶ್ವ ಬ್ಯಾಂಕಿನ ನಿಯಮಗಳಂತೆ 826 ಕಿ.ಮೀ. ಗಳ ಸಂಪೂರ್ಣ ಉದ್ದಕ್ಕೆ ಯೋಜನೆಯನ್ನು ಅನುಷ್ಟಾನಗೊಳಿಸಲು ಪೂರ್ವಬಾವಿ ಚಟುವಟಿಕೆಗಳಾದ ಭೂಸ್ವಾಧೀನ, R&R ವಿಷಯಗಳು,
ಸಾರ್ವಜನಿಕ ಆಸ್ತಿಗಳಿಗೆ ಬದಲಿ ವ್ಯವಸ್ಥೆ ಮಾಡುವುದು ಹಾಗೂ ಪರಿಸರ ಸಂಬಂಧಿ ವಿಷಯಗಳನ್ನು ಕೈಗೆತ್ತಿಗೊಳ್ಳಲಾಗಿದೆ. ಈ ಯೋಜನೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ KSHA, 1964 ರ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ.
ಇಪಿಸಿ ರಸ್ತೆಗಳಿಗೆ ಋಣಭಾರ ತೀರಿಸುವ ಪ್ರಕ್ರಿಯೆಯನ್ನು ಮುಗಿಸುವಲ್ಲಿ ಮುಂದುವರೆದ ಹಂತದಲ್ಲಿದೆ.
ಕ ರಾ ಹೆ ಅ ಯೋ ೨ - ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್
ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ನೆರವಿನ ಯೋಜನೆ (ಹಂತ-೨ )
ಭಾರತ ಸರ್ಕಾರದ ಶಿಫಾರಸ್ಸಿನಂತೆ 2010 ರಲ್ಲಿ KSHIP-II ಯೋಜನೆಗಾಗಿ US$ 300 ಮಿಲಿಯನ್ ಮೊತ್ತದ ನಿಧಿಯನ್ನು ನೀಡಲು ಎಡಿಬಿ ಪ್ರಸ್ತಾಪಿಸಿದೆ.
ಎಡಿಬಿ ನಿಯೋಗವು ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯನ್ನು ಯೋಜನಾ ತಯಾರಿ ಚಟುವಟಿಕೆಗಳನ್ನು ಪರಾಮರ್ಶಿಸಲು ಈ ಕೆಳಕಂಡ ದಿನಾಂಕಗಳಂದು ಬೇಟಿ ಮಾಡಿತು
- ನವಂಬರ್ 2008 - ಸಂಪರ್ಕ ಧ್ಯೇಯ.
- ಮಾರ್ಚ್ 2009 - ಸಮಾಲೋಚನೆ ಧ್ಯೇಯ.
- ಫೆಬ್ರವರಿ 2010 - ಪ್ರಾರಂಭ ಧ್ಯೇಯ.
- ಮೇ 2010 - ಸಾಲ ಪರಿಶೋಧನೆ ಧ್ಯೇಯ
- ಆಗಸ್ಟ್ 2010 - ಸಾಲ ವಾಸ್ತವ ಪರಿಶೋಧನೆ ನಿಯೋಗ
ಎಡಿಬಿ ನಿಯೋಗವು ಯೋಜನೆಯನ್ನು ಕಾರ್ಯಗತಗೊಳಿಸಲು ಈ ಕೆಳಕಂಡ ಹಂಗಾಮಿ ಕಾಲಾವಧಿಯನ್ನು ಪ್ರಸ್ತಾಪಿಸಿದೆ.
- ಸ್ಥಳೀಯ ಸಂಧಾನ - ಅಕ್ಟೋಬರ್ 2010
- ಮಂಡಳಿ ಪರಿಗಣನೆ- ನವೆಂಬರ್ 2010
- ಒಪ್ಪಂದ ಸಹಿ -ಮಾರ್ಚ್, 2011
- ಸಾಲ ಪರಿಣಾಮಕಾರಿತ್ವ - ಮೇ 2011
ಕರ್ನಾಟಕ ಹೆದ್ದಾರಿ ಅಭಿವೃದ್ಧಿ ಯೋಜನೆಯ ತ್ವರಿತಗತಿಯ ತಯಾರಿಯನ್ನು ಗಮನಿಸಿ ADB ನಿಯೋಗವು ಸಾಲ ನೀಡುವ ಪ್ರಕ್ರಿಯೆಯನ್ನು 2011-12 ರ ಬದಲಾಗಿ 2010-11 ಕ್ಕೆ ಮಾಡುತ್ತಲಿದೆ.
ಸಾಲ ನೀಡುವ ಕುರಿತಾದ ಪ್ರಕ್ರಿಯೆಯು 29 ರಿಂದ 30, ಅಕ್ಟೋಬರ್ 2010 ರಲ್ಲಿ ಜರುಗಿತು.
KSHIP-II.ನ ಒಟ್ಟು 3411 ಕಿ.ಮೀ. ಗಳಲ್ಲಿ 634 ಕಿ.ಮೀ. ಉದ್ದದ ಆದ್ಯತೆಯ ಮೇಲೆ ಆಯ್ಕೆ ಮಾಡಿದ ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಎಡಿಬಿ ನಿಯೋಗವು ಅಂತಿಮಗೊಳಿಸಿತು.
ಎ ಡಿ ಬಿ ಯೋಜನೆಗೆ ಆಯ್ಕೆಯಾದ ರಸ್ತೆಯ ಪಟ್ಟಿ ಕೆಳಕಂಡಂತಿದೆ :
Sl. No. |
Package No. |
Link ID |
Link Name |
Length in Kms |
Total Length Kms |
1 |
AEP-1 |
64C
64D
64E |
Magadi NH 48– Dobbaspet – Koratagere |
13.88
20.44
33.86 |
68.2 |
2 |
AEP-2 |
64H |
Pavagada to AP Border |
23.205 |
23.205 |
3 |
AEP-3A |
57A |
Gubbi to Beeragonahalli near Yediyur |
49.03 |
49.03 |
4 |
AEP-3B |
57B 57C |
Beeragonahalli near Yediyur to Mandya |
59.59 |
59.59 |
5 |
AEP-4 |
T13
T17 |
Jagaluru NH-13
About 5 Km from SH-19 (KSHIP Road) |
9.25
5.13 |
14.38 |
6 |
AEP-5 |
48A |
Padubidri-Karkala |
27.80 |
27.80 |
7 |
AEP-6A |
42A |
Davangere to Channagiri |
53.63 |
53.63 |
8 |
AEP-6B |
42B |
Channagiri to Birur |
51.98 |
51.98 |
9 |
AEP-7 |
27A
27B |
Shelvadi-Gadag-Mundagi
|
30.540
33.64 |
63.44 |
10 |
AEP-8 |
31A
31B |
Mudgal-Tavaragere
Kanakagiri-Gangawathi |
31.21
43 |
74.21 |
11 |
AEP-9A |
21C
21D |
Saundatti to Ramdurga
Ramdurga to Halagatti Junction |
20.000
22.065 |
42.065 |
12 |
AEP-9B |
21D
21E |
Halagatti Junction(Ramdurga) to Badami
Badami to Badami Bypass Junction |
21.53
33.36 |
45 |
13 |
AEP-9C |
21E
21F
21E |
Badami Bypass junction to Pattadakallu
Pattadakallu to Kamatagi
Badami Bypass |
15.13
15.53
12.47 |
43.13 |
Total |
|
615.17 |
ಕ್ರಮ ಕೈಗೊಂಡಿರುವಿಕೆ ಮತ್ತು ಹಾಲಿ ಸ್ಥಿತಿ :
ಪೂರ್ವಭಾವಿ ಚಟುವಟಿಕೆಗಳಾದ ಸಾರ್ವಜನಿಕ ಆಸ್ತಿಗಳಿಗೆ ಬದಲಿ ವ್ಯವಸ್ಥೆ ಮಾಡುವುದು, ಭೂಸ್ವಾಧೀನ ಮತ್ತು R & R ಕಾರ್ಯಗಳು ಪ್ರಗತಿಯಲ್ಲಿದೆ.
ಶಾಸನಬದ್ಧ ಪರಿಸರ ಮಾಲಿನ್ಯ ಕುರಿತು ನಿರಾಪೇಕ್ಷಣ :
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇಂದ ನಿರಾಪೇಕ್ಷಣ ಪತ್ರ ಪಡೆಯಲಾಗಿದೆ.
SIEAAಇಂದ ನಿರಾಪೇಕ್ಷಣಪತ್ರಕ್ಕಾಗಿ ನಿರೀಕ್ಷಿಸಲಾಗಿದೆ.
ಅರಣ್ಯ ಇಲಾಖೆುಂದ ಪರವಾನಗಿಯನ್ನು ನೀಡುವ ಕಾರ್ಯ ಪ್ರಗತಿಯಲ್ಲಿದೆ
ಸಂಗ್ರಹಣೆಯ ಬಿಡ್ಡಿಂಗ್ ದಾಖಲೆಗಳು :
ಸಿವಿಲ್ ಕಾಮಗಾರಿಯ ಬಿಡ್ಡಿಂಗ್ ದಾಖಲೆಗಳನ್ನು (ಗುತ್ತಿಗೆಯ ಷರತ್ತುಗಳು) ADBಯು ಬಿಡ್ ದಾಖಲೆಗಳಿಗೆ ಪೂರಕ ವರದಿಗಳನ್ನು ತಯಾರಿಸಲಾಗಿರುವ ಕುರಿತು ಮಾಹಿತಿಯನ್ನು ರವಾನಿಸಿದೆ.
ಸಮಾಲೋಚಕರ ಮೇಲ್ವಿಚಾರಣೆ ಕುರಿತ ಆರ್ ಎಫ್ ಪಿ ದಾಖಲೆಗಳನ್ನು ADBಗೆ ಸಲ್ಲಿಸಲಾಗಿದೆ.
ಎಡಿಬಿ ಯೋಜನೆಯ ಸಂಗ್ರಹಣಾ ಯೋಜನೆಯನ್ನು ADBಗೆ ಸಲ್ಲಿಸಿದೆ.
ತಾತ್ಕಾಲಿಕ ಕಾರ್ಯಕ್ರಮದಂತೆ ಬಿಡ್ಗಳನ್ನು ಡಿಸೆಂಬರ್ 2010 ರಲ್ಲಿ ಆಹ್ವಾನಿಸಲಾಗುವುದು ಮತ್ತು ಗುತ್ತಿಗೆಗಳನ್ನು ಏಪ್ರಿಲ್ 2011 ರಲ್ಲಿ ಆಯ್ಕೆ ಮಾಡಿದವರಿಗೆ ನೀಡಲಾಗುವುದು.
ಅಧ್ಯಕ್ಷರ (R&R)ರ ವರದಿ ಮತ್ತು ಶಿಫಾರಸ್ಸುಗಳು, Pಂಒ ಮತ್ತು ಇತರೆ ದಾಖಲೆಗಳನ್ನು ಅಂತಿಮಗೊಳಿಸಿದೆ.
ಪಿಗ್ಗಿ-ಬ್ಯಾಕ್ ಸಿಡಿಟಿಎ, ಪಿಆರೀಂಚಿ, ಎಸ್-ಪಿ.ಎ.ಟಿ.ಎ ಗಳಿಗೆ ಟರ್ಮ್ಸ್ ಆಫ್ ರೆಫರೆನ್ಸ್ ಗಳನ್ನು ಅಂತಿಮಗೊಳಿಸಿದೆ.
ಎಡಿಬಿ ಯು ಸಾಲ ನೀಡುವ ಕುರಿತ ಮಾತುಕತೆಯ ದಿನಾಂಕವನ್ನು 29-29, ಅಕ್ಟೋಬರ್, 2010 ಎಂದು ತಿಳಿಸಿದೆ.
ಎಡಿಬಿ ಯೋಜನೆಯನ್ನು ಒಪ್ಪಿರುವ ಕುರಿತು ಸರ್ಕಾರಿ ಆದೇಶ ನೀಡಲಾಗಿದೆ.
ಎಸ್.ಎಲ್.ಸಿ .ಸಿ ; ಒಪ್ಪಿಗೆಯನ್ನು ಎಡಿಬಿ ಯೋಜನೆಗೆ ಪಡೆಯಲಾಗಿದೆ.
ಎಡಿಬಿಯು ಜಪಾನ್ ವಿಶೇಷ ನಿಧಿಯನ್ನು ಅಆಖಿಂ ಅಧ್ಯಯನ ನಡೆಸಲು US$ 1.5 ಮಿಲಿಯನ್ ಒದಗಿಸಿದೆ. ಈ ವಿಷಯಕ್ಕೆ ಮೆ: ಸ್ಕಾಟ್ ವಿಲ್ಸನ್ ಇಚಿಡಿಯಾ ಪ್ರೈ.ಲಿ.ರವರು ಸಮಾಲೋಚಕರಾಗಿರುತ್ತಾರೆ ಮತ್ತು ಇವರಿಗೆ ವಹಿಸಿರುವ ಕೆಲಸಗಳು ಈ ಕೆಳಗಿನಂತಿವೆ:
ಎ. ರಸ್ತೆ ವಲಯಕ್ಕೆ ಬೃಹತ್ ಯೋಜನೆಯನ್ನು ತಯಾರಿಸುವುದು.
ಬಿ. ಬೃಹತ್ ಯೋಜನೆ ಕಾರ್ಯದಲ್ಲಿ ಏSಊಖಿಖಿಂ ಯನ್ನು ಸ್ಥಾಪಿಸುವುದು ಮತ್ತು ಬಲಪಡಿಸುವುದು
ಸಿ. ರಸ್ತೆ ವಲಯದ ನಿರ್ವಹಣೆಗಾಗಿ, ಅಭಿವೃದ್ಧಿಗಾಗಿ ಮತ್ತು ತರಬೇತಿಗಾಗಿ ಲೋಕೋಪಯೋಗಿಯ ಸಾಂಸ್ಥಿಕ ಗಳನ್ನು ಬಲಪಡಿಸುವುದು
ಸಮಾಲೋಚಕರ ಕಾರ್ಯವು ಪ್ರಗತಿಯಲ್ಲಿದೆ. ಸಮಾಲೋಚಕರು ಎ, ಬಿ, ಸಿ., ಗಳ ಮೇಲೆ ವ್ಮಧ್ಯಂತರ ವರದಿ ಸಲ್ಲಿಸಿರುತ್ತಾರೆ.
ಪ್ರಸ್ತಾವಿತ ಅಖಓ ಕುರಿತು ಲೋಕೋಪಯೋಗಿ ಇಲಾಖೆ ಅಭಿಪ್ರಾಯ, ಪಾಮರ್ಶೆಗಾಗಿ ದಿ: 22-11-2010 ರಂದು ಕಾರ್ಯಾಗಾರ ನಡೆಸಲಾುತು.